ಶುಕ್ರವಾರ, ನವೆಂಬರ್ 5, 2010

ಲಕ್ಷ್ಮಿ ಅನ್ನೋ ಸುಂದರಿಯೂ..ಅವಳ ದುರಂತ ಕಥನವೂ...

ಅದೇಕೋ ನನ್ನ ಓದು ಯಾವತ್ತಿಗೂ ಸುಗಮವಾಗಿ ಸಾಗಲೇ ಇಲ್ಲ.ಮೈಸೂರಿನ ಯಾವುದಾದರು "ಒಳ್ಳೆ ಖಾಸಗಿ ಶಾಲೆಗೆ" ಸೇರಿಸಿ ನನ್ನನ್ನು ಮತ್ತು ನನ್ನ ಬದುಕನ್ನು ಹಸನು ಮಾಡುವ ಮೂಲಕ ನನ್ನ ಮನೆಯನ್ನು ನೆಟ್ಟಗೆ ಮಾಡುವ ಪಣ ನನ್ನ ಮಾವನದು. ಆದರೆ ನನ್ನದು ಮೊದಲಿಂದಲೂ ಯುದ್ಧ ಕಾಲೇ ಸಶ್ತ್ರಾಭ್ಯಾಸ ಎಂಬಂಥದ್ದು. ಎಲ್ಲೂ ಅರ್ಜಿ ಹಾಕದ ಕಾರಣ ಅಶೋಕಪುರದ ನ್ಯೂ ಟೈಪ್ ಮಿದ್ದ್ಲೇ ಸ್ಕೂಲ್ ನಲ್ಲಿ ನನ್ನ ಮಾಧ್ಯಮಿಕ ಶಿಕ್ಷಣ ಆಯಿತು.
ಮೊದಲಿಂದಲೂ ನಾನು ತರಗತಿಯಲ್ಲಿ ಸ್ವಲ್ಪ ಬುಧ್ಧಿವಂತ ಎಂಬ ಆರೋಪ ಇತ್ತು. ಅದಕ್ಕೆ ಸಾಕ್ಷಿ ಎಂಬಂತೆ ಹೇಗೋ ಮುಲ್ಯಮಾಪನ ಮಾಡಿದ್ಹ ಮೇಷ್ಟ್ರುಗಳು ಒಂದಿಷ್ಟು ಹೆಚ್ಚೇ ಅಂಕ ಕೊಟ್ಟು ಬಿಟ್ಟಿದ್ದರು! ಹಾಗಾಗಿ ಎಲ್ಲ ತರಗತಿಯ ಹುಡುಗರು ಮತ್ತು ಹುಡುಗಿಯರು ನನ್ನೊಂದಿಗೆ ತುಸು ಚೆನ್ನಾಗಿ ಬೆರೆಯುತ್ತಿದ್ದರು.
ಅಷ್ಟೇ ಅಲ್ಲ, ಗೊತ್ತಿದ್ದೂ ಗೊತ್ತಿಲ್ಲದ್ದು ಎಲ್ಲವನ್ನು ಕೇಳುತ್ತ ನನಗೆ ಮುಜುಗರ ಹುಟ್ಟಿಸಿ ಬಿಡುತ್ತಿದ್ದರು.
ಎ.ಎಲ್.ರುಕ್ಮಿಣಿಯಮ್ಮ ಮತ್ತು ಏನ್.ಇಂದಿರಾ ಎಂಬ ಇಬ್ಬರು ತಾಯಿ ಹೃದಯದ ಟೀಚರ್ಗಳು ನನ್ನನ್ನು ಅಕ್ಷರಶಹ ದತ್ತು ತೆಗೆದುಕೊಂಡಂತೆ ಸಾಕುತ್ತಿದ್ದುದರಿಂದ ನನಗಿಂತ ದೈಹಿಕವಾಗಿ ಚೆನ್ನಾಗಿದ್ದ ಹುಡುಗರು ನನ್ನ ಗೆಳೆತನ ಬಯಸುತ್ತಿದ್ದರು. ಇದಕ್ಕೆ ಹುಡುಗಿಯರೂ ಕೂಡ ಹೊರತಾಗಿರಲಿಲ್ಲ.
ಈ ಸಮಯದಲ್ಲಿ ನನಗೆ ಅದೆಷ್ಟು ಕೀಳರಿಮೆ ಎಂದರೆ ಸಹಪ್ಪತಿಗಳು ತಾವೇ ಬಂದು ಮಾತಾಡಿಸಿದರೂ ನಾನು ಅಷ್ಟು ಬೇರೆಯುಥ್ಥಲೇ ಇರಲಿಲ್ಲ. ಹೀಗಿದ್ದಾಗ, ನನಗೆ ಓದಿನಲ್ಲಿ ಪ್ರಬಲ ಪ್ರತಿಸ್ಪರ್ಧಿ ಎಂಬಂತಿದ್ದ ರೂಪಕಲ ಅನ್ನೋ ಹುಡುಗಿ ಒಬ್ಬಳಿದ್ದಳು. ಅವಳ ಕುಟುಂಬದ್ದು ಹೀಗೂ ಉಂಟೆ ಅನ್ನೋ ತರದ ಕಥೆ! ಅವಳ ಅಪ್ಪನಿಗೆ ಒಬ್ಬಳೇ ಹೆಂಡತಿ: ಆದರೆ ಹನ್ನೆರಡು ಜನ ಮಕ್ಕಳು; ಅದರಲ್ಲೂ ಏಕಮಾತ್ರಪುತ್ರ ಮತ್ತು ಉಳಿದೆಲ್ಲರೂ ಹೆಣ್ಣು ಮಕ್ಕಳೇ!! ಅಲ್ಲದೆ ಅವರಧು ಸರ್ವಧರ್ಮ ಪರಿಪಾಲನೆ ಕುಟುಂಬ ಎಂಬಂತಿತ್ತು. ಏಕೆಂದರೆ ಎಲ್ಲ ಹೆಣ್ಣು ಮಕ್ಕಳು ಒಂದೊಂದು ಜಾತಿ ಮತ್ತು ಧರ್ಮದ ಹುಡುಗರನ್ನ ವರಿಸಿದ್ದರು. ಇಂತಿರ್ಪ ರೂಪಕಲ ಜತೆ ನನ್ನದು ಪ್ರತಿಸ್ಪರ್ಧಿ ಜತೆ ಹೇಗಿರಬೇಕೋ ಹಾಗೆ ಇದ್ದ ಸ್ನೇಹ. ಆದರೆ, ನನ್ನ ಓರಗೆಯ ಹುಡುಗರಿಗೆ ಬೇರೆಂದು ಭಾವ. ಇಬ್ಬರು ಚೆನ್ನಾಗಿ ಓದುವುದರಿಂದ ಇಬ್ರು ಲವ್ ಮಾಡ್ಬಿಡಿ ಅನ್ನೋ ಅಂಥದ್ದು!!! ಕೇವಲ ೫, ೬ ಮತ್ತು ೭ ನೆ ತರಗತಿಗೆ ಬಾಲ್ಯಪ್ರೇಮದ ಮಾತು ನನಗೆ ಭಯ, ನಾಚಿಕೆ, ಮುಜುಗರ ಎಲ್ಲವನ್ನು ಏಕಕಾಲಕ್ಕೆ ಹುಟ್ಟಿಸಿದ್ದವು.
ಹೀಗಿರುವಾಗ ಅವಳ ಜತೆಗೆ ಲಕ್ಷಿ ಅನೋ ಹುಡುಗಿ ಕೂಡ ಸದಾ ಇರುತ್ತಿದ್ದಳು. ಥೇಟು ಸಿನಿಮಾ ನಟಿ ಲಕ್ಷ್ಮಿಯ ಹಾಗೆ ರೂಪ ಮತ್ತು ನುಡಿ. ಸುಂದರಿ ಎನ್ನೋ ಕಾರಣಕ್ಕೋ ಏನೋ ಚೂರು ಜಂಬ. ಅದಕ್ಕೆ ಬೆರೆತಂತೆ ಚೂರು ಜಾಸ್ತಿ ಬಿನ್ಕವೂ ಇತ್ತು. ಅಂಥವಳನ್ನು ಪಕ್ಕದ ಹೈ ಸ್ಕೂಲು ನ್ಮಥ್ತು ಪಿಯುಸಿ ಹುಡುಗರು ಬಂದು ಲೈನ್ ಹೊಡೆಯುತ್ತಿದ್ದುದು ಸಾಮಾನ್ಯವೇ ಆಗಿತ್ತು. ಆದರೆ ಲಕ್ಷ್ಮಿ ಮಾತ್ರ ಎಲ್ಲರನ್ನೂ ಹುಚ್ಚು ಹಿಡಿಸಿದಲೇ ಹೊರತು ಉ ಹುಂ..ಒಪ್ಪಲೇ ಇಲ್ಲ. ದಿನ ಉರುಳಿ, ತಿಂಗಳು ಕಳೆದು, ವರುಷ ಮುಗಿದು...ನಮ್ಮ ಏಳನೇ ಕ್ಲಾಸು ಎಂಬ ಅಗ್ನಿ ಪರೀಕ್ಷೆ ಮುಗಿಯಬೇಕು ಎನ್ನುವಶರಲ್ಲಿ ಸ್ಕೂಲ್ ಡೇ ಕಾರ್ಯಕ್ರಮ ಹಾಗು ಶಾಲೆ ಪ್ರವಾಸ ಎಡತಾಕಿದವು. ಸ್ಕೂಲ್ ಡೇ ಗೆ ಗ್ರುಪ್ ಡಾನ್ಸ್ ಗಾಗಿ ನಾನು ಲಕ್ಷ್ಮಿ, ರೂಪ, ಚಂದ್ರಕಲಾ..ಹೀಗೆ ಒಂದಿಷ್ಟು ವಿಧ್ಯಾರ್ಥಿಗಳು ಸೇರಿಕೊಂಡೆವು. ಅಲ್ಲಲ್ಲ...ಸೇರಿಸಿಕೊಳ್ಳಲಾಯಿತು. ಈ ದಿನಗಳಲ್ಲೇ ಲಕ್ಷ್ಮಿ ಅಲಿಯಾಸ್ ಲಕ್ಕಿ ಎಂಬ ಸುಂದರಿ ಚೆಲುವೆ ನನ್ನೊಂದಿಗೆ ಹೆಜ್ಜೆ ಇಟ್ಟಳು..ಮಯೆ ಆಡದ ನನ್ನನ್ನ ಎಲ್ಲ ರೇಗಿಸಲು ಶುರುವಿಟ್ಟು ಕೊಂಡರು. ಅಷ್ಟರಲ್ಲೇ ಶಾಲೆ ಪ್ರವಾಸ ಏರ್ಪಾಡಾಯಿತು. ನರಕದ ಅದ್ಯಾವ ಅಸುರರು ಒಂದೇ ಬಾರಿ ಅಸ್ತು ಎಂದರೋ ಕಾಣೆ..ಲಕ್ಷ್ಮಿ ನನ್ನ ಜತೆಯೇ ಕೂರುವ ಸಂದರ್ಭ ಬಂತು.
ಪಾಪ ಅವಳಿಗೆ ಪ್ರಯಾಣ ಒಗ್ಗದು. ವನ್ದೆಸಮ ವಾಂತಿ ಮಾಡಿಕೊಳ್ಳ ತೊಡಗಿದಳು. ಪಕ್ಕವೇ ಕುಳಿತಿದ್ದರಿಂದ ಹೆಗಲಿಗೆ ಒರಗಿ ಮಲಗಿ ಬಿದುತಿದ್ದಳು. ನುಂಗುವ ಹಾಗಿಲ್ಲ ಉಗಿಯುವ ಹಾಗಿಲ್ಲ ಎಬ ಸ್ತಿತಿ ನನ್ನದು. ಆಕೆಗೆ ಅಮ್ಮ ಅಪ್ಪ ಇಲ್ಲದೆ ಚಿಕ್ಕಮ್ಮನ ಜತೆ ಇದ್ದಳು. ಅದ್ದರಿಂದಲೋ ಏನೋ ನನ್ನ ಜತೆ ಸಲುಗೆಯ ಸ್ನೇಹ ಬೆಳೆದು ಕೊನೆಯ ೨೦ ದಿನ ಒಳ್ಳೆಯ ಗೆಳೆತನ ಆಯಿತು. ನಂತರ ಹೈ ಸ್ಕೂಲು, ಪಿಯುಸಿ, ಡಿಗ್ರಿ, ಮಾಸ್ಟರ್ ಡಿಗ್ರಿ ಅಂತ ನಾನು ಎದ್ದು ಬಿದ್ದು ಪೂರೈಸುವ ಹೊತ್ತಿಗೆ ಲಕ್ಷ್ಮಿ, ರುಪಕಳ, ನನ್ನ ಆತ್ಮಿಯ ಗೆಳೆಯ ಆಗಿದ್ದ ಅನಿಲ್ ಸೇರಿದಂತೆ ಎಲ್ಲರ ಬದುಕೋ ನಮ್ಮ ದಿಕ್ಕನ್ನು ಬದಲಿಸಿತ್ತು. ಅಷ್ಟೂ ವರ್ಷ ನಮ್ಮ ಭೇಟಿ ಆಗಲೇ ಇಲ್ಲ. ಗೆಳೆತನ ಅಲ್ಲಿಗೆ ಒಂದು ಲಾಂಗ್ ಬ್ರೇಕ್ ತೆಗೆದು ಕೊಂಡಿತ್ತು. ಮೊನ್ನೆ ನನ್ನ ಕ್ಲಾಸ್ಮೇಟ್ ಮಂಜು ಸಿಕ್ಕಿ ಹೀಗೆ ಲೋಕಾಭಿರಾಮವಾಗಿ ಮಾತಾಡುತ್ತಿದ್ದಾಗ ಇದೆಲ್ಲ ನೆನೆಪಾಯಿತು. ಒಂದಿಷ್ಟು ಹರಟಿ ನಕ್ಕವು. ಇದ್ದಕಿದ್ದಂತೆ ರೂಪ, ಚಂದ್ರಕಲಾ, ಲಕ್ಷ್ಮಿ, ರಾಮಚಂದ್ರ,ಅನಿಲ್, ಎ. ಮನು, ಕೆ.ಮಂಜು, ಮಂಚಯ್ಯ...ಇತ್ಯಾದಿ ಸ್ನೇಹಿತರ ಮಾತು ಬಂತು. ಮಂಜು, ಲಕ್ಷ್ಮಿ ಕುರಿತು ಮಾತನಾಡುತ್ತಲೇ ಇದ್ದ...ಏಳನೇ ಕ್ಲಾಸು ಮುಗಿಸಿದ ಲಕ್ಷ್ಮಿ ಹೈ ಸ್ಕೂಲು ಸೇರುತ್ತಾಳೆ. ನಂತರ ಎಸೆಸೆಲ್ಸಿ ಮುಗಿಸಲು ಕಷ್ಟ ಪಡುತಾಳೆ. ಕಾಲೇಜು ಕನಸಾಗೆ ಉಳಿಯುತ್ತೆ. ಬೆಳ್ಳಗೆ ಚೆನ್ದವಿದ್ದ ಹುಡುಗಿಗೆ ಹಲವು ಮಾಡುವೆ ಪ್ರಸ್ತಾಪಗಳು ಬರುತ್ತವೆ. ಚಿಕ್ಕಮ್ಮನ ಜತೆ ಬೆಳೆಯುತ್ತಿದ್ದ ಹುಡುಗಿಗೆ ಬದುಕು ಮುಖ್ಯ ಎನಿಸಿ, ಸ್ವತಂತ್ರ ಬದುಕು ಬಯಸಿ ಹಸೆ ಏರುವ ನಿರ್ಧಾರ ಬಂದು ಬಿಡುತ್ತೆ. ಮೈಸೂರು ನಗರಾಬಿವೃದ್ಧಿ ಪ್ರಾಧಿಕಾರದಲ್ಲಿ ನುಉಕರಿ ಇದ್ದ ಹುಡುಗನ್ನ ಮದುವೆ ಆಗುವ ಪ್ರಸ್ತಾಪಕ್ಕೆ ಒಪ್ಪಿಗೆ ನೀಡುತ್ತಲೇ. ಮಾಡುವೆ ಆಗುತ್ತೆ. ಸಂಸಾರ ಕೂಡ ಚೆನ್ನಾಗೆ ನಡೆಯುತ್ತೆ. ಅದಕ್ಕೆ ಸಾಕ್ಷಿ ಎನ್ನುವಂತೆ ೩ ಮಕ್ಕಳು ಒಂದ್ದದಮೇಲೆ ಒಂದರಂತೆ ಹುಟ್ಟುತ್ತವೆ. ಆ ಕಾಲಕಾಗಲೇ ಗಂಡನಿಗೆ ಒಂದಿಷ್ಟು ಚಟಗಳು ಹೆಗಲೇರುತ್ತವೆ. ಕುಡಿತ, ಜೂಜೂ ಅಷ್ಟೇ ಇದ್ದಾರೆ ಲಕ್ಷಿಯ ಬದುಕು ಲಕ್ಕಿ ಆಗಿರುತ್ತಿತ್ತೇನೋ... ಹಾಗಾಗಲಿಲ್ಲ. ಲಕ್ಷ್ಮಿ ಗಂಡನಿಗೆ ವೇಶ್ಯೆಯರ ಶೋಕೆ ಕೂಡ ಇತ್ತು. ಚೆನ್ದವಿದ್ದ ಗಂಡನ್ನ ಅವಳು ಚಿಟಿಕೆಯಷ್ಟೂ ಅನುಮಾನಿಸಲಿಲ್ಲ. ಅದು ಅವಳ ಬದುಕಿಗೆ ಆಪತ್ತು ತ್ನದೊದ್ದಬಹುದು ಎಂಬ ಕನಸು ಕೂಡ ಅವಳಿಗಿರಲಿಲ್ಲ.
ಲಕ್ಷ್ಮಿ ಗಂಡ ಮಾರಕ ರೋಗಕ್ಕೆ ಬಲಿಯಾದ. ಹಾತೀರ ಸೇರಿಸದ ಹೆಂಡತಿಯನ್ನ ರಲ್ಲೇ ತೆಗೆದು ಬಾರಿಸಿ ಬೀದಿಯಲೆಲ್ಲ ಎಳೆದಾಡಿ ಅವಮಾನಿಸಿದ. "ನಂಗ್ ಬಂದ ರೋಗ ನಿನಗೂ ಬರಲಿ. ನೀನು ಬದುಕಿದ್ರೆ ಬೇರೆವ್ನ್ ಜತೆ ಹಾಯಗಿರ್ತಿಯ ಬೋಸುಡಿ. ನಂ ಜತೆ ನೀನು ಸಾಯಬೇಕು " ನಡಿ ಬಯ್ದು ಒಟ್ಟಿಗೆ ಮಲಗಿ ಸುಖಿಸಿದ. ಪಾಪ, ಚೆಂದದ ಲಕ್ಷ್ಮಿಗೂ ಖಾಯಿಗೆ ಅಂಟಿತು. ಗಂಡ ಸತ್ತ. ಕೆಲವೇ ವರ್ಷ:ಲಕ್ಷ್ಮಿ ಕೂಡ ಇಹ ತ್ಯಜಿಸಿದಳು. ಅವಳ ಮೂರೂ ಮಕ್ಕಳು, ಅದರಲ್ಲೂ ಹೆಣ್ಣು ಕಂದಮ್ಮಗಳು ಈಗ ತಬ್ಬಲಿ.
ಮಂಜು ಹೇಳುತ್ತಲೇ ಹೋದ. ಕರುಳು ಕಲಸಿದನ್ತಯಿತು. ಮಾತು ಬೇಡವೆನಿಸಿ ಇಬ್ಬರು ಎದ್ದೆವು. ಲಕ್ಷ್ಮಿಯಾ ಸ್ಕೂಲು ದಿನಗಳು ನೆನಪಾಗಿ ಕಣ್ಣು ಒದ್ದೆಯಾದವು.